ಭಾವನಾ ಬಾಲಕೃಷ್ಣನ್ (ಜನನ : ೨೫ ಮೇ ೧೯೮೫) ಒಬ್ಬ ಭಾರತೀಯ ದೂರದರ್ಶನ ನಿರೂಪಕಿ, ಕ್ರಿಕೆಟ್ ನಿರೂಪಕಿ, ವಿಡಿಯೋ ಜಾಕಿ, ಹಿನ್ನೆಲೆ ಗಾಯಕಿ ಮತ್ತು ನೃತ್ಯಗಾರ್ತಿ. ಮಾಯಾಂತಿ ಲ್ಯಾಂಗರ್ ಅವರ ನಂತರ ಭಾವನಾ ಭಾರತದ ಅತ್ಯಂತ ಜನಪ್ರಿಯ ಕ್ರೀಡಾ ಪತ್ರಕರ್ತರಲ್ಲಿ ಒಬ್ಬರು. ಅವರು ಪ್ರಸ್ತುತ ಸ್ಟಾರ್ ಸ್ಪೋರ್ಟ್ಸ್‌ನ ಪ್ರಸಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಚಾನೆಲ್‌ಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ೨೦೧೯ ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಕಾಮೆಂಟೇಟ್ ಮಾಡಿದ ಮಹಿಳೆಯರಲ್ಲಿ ಬಾಲಕೃಷ್ಣನ್ ಒಬ್ಬರು. ಭಾವನಾ ಹೆಚ್ಚಾಗಿ ತಮಿಳಿನಲ್ಲಿ ತನ್ನ ಹೋಸ್ಟಿಂಗ್ ಮತ್ತು ಪ್ರೆಸೆಂಟಿಂಗ್ ಕೆಲಸವನ್ನು ಮಾಡುತ್ತಾಳೆ ಮತ್ತು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾಳೆ. == ವೃತ್ತಿ == ಬಾಲಕೃಷ್ಣನ್ ಅವರು ಅಲ್ಪಾವಧಿಗೆ ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ರಾಜ್ ಟಿವಿಗೆ ಹೋಸ್ಟ್ ಆಗಿ ಸೇರಿಕೊಂಡು ನಡೆಸಿಕೊಟ್ಟ ಮೊದಲ ದೂರದರ್ಶನ ಕಾರ್ಯಕ್ರಮ ಬೀಚ್ ಗರ್ಲ್ಸ್ ಶೋ . ನಂತರ ಅವರು ಸ್ಟಾರ್ ವಿಜಯ್ ಚಾನೆಲ್‌ಗೆ ಸೇರಿದರು. ೨೦೧೧ ರಲ್ಲಿ ಚಾನೆಲ್‌ನೊಂದಿಗೆ ಪೂರ್ಣ ಸಮಯದ ನಿರೂಪಕರಾದರು. ವಿಜಯ್ ಟಿವಿಯೊಂದಿಗಿನ ಅವರ ಮೊದಲ ಕಾರ್ಯಕ್ರಮ ಸೂಪರ್ ಸಿಂಗರ್ ಜೂನಿಯರ್. ಅವರು ೨೦೧೭ ರವರೆಗೆ ಏರ್‌ಟೆಲ್ ಸೂಪರ್ ಸಿಂಗರ್ ಅನ್ನು ಸಹ ಆಯೋಜಿಸಿದರು. ಅವರು ಜೋಡಿ ನಂಬರ್ ಒನ್‌ನ "ಫನ್ ಅನ್‌ಲಿಮಿಟೆಡ್" ಸೀಸನ್ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಚಾನೆಲ್‌ನೊಂದಿಗೆ ಹೋಸ್ಟ್ ಮಾಡಿದ್ದಾರೆ. ೨೦೧೭ ರಲ್ಲಿ ಅವರು ಸ್ಟಾರ್ ಸ್ಪೋರ್ಟ್ಸ್‌ಗೆ ಕ್ರೀಡಾ ಪತ್ರಕರ್ತೆಯಾಗಿ ಸೇರಿಕೊಂಡರು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಗೂ ಪ್ರೊ ಕಬಡ್ಡಿ ಲೀಗ್‌ನ ಪ್ರಸಾರಗಳನ್ನು ಆಯೋಜಿಸಿದರು. ಅವರು ೨೦೧೮ ರ ಐಪಿಎಲ್ ಋತುವಿನಲ್ಲಿ ಸ್ಟಾರ್ ಸ್ಪೋರ್ಟ್ಸ್ ತಮಿಳಿನ ನಿರೂಪಕರಾಗಿ ಸೇವೆ ಸಲ್ಲಿಸಿದರು. ೨೦೧೮ ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೇವಲ ಇಬ್ಬರು ಮಹಿಳಾ ನಿರೂಪಕರಲ್ಲಿ ಒಬ್ಬರಾಗಿದ್ದರು. ಬಾಲಕೃಷ್ಣನ್ ೨೦೧೮ ರಲ್ಲಿ ಗಾಯಕರಾಗಿ ಪಾದಾರ್ಪಣೆ ಮಾಡಿದರು ಮತ್ತು ಬಿಬಿ ಅವರ ಮೊದಲ ಸಿಂಗಲ್ ದಿ ಮ್ಯಾಶ್‌ಅಪ್ ಸರಣಿಯನ್ನು ಬಿಡುಗಡೆ ಮಾಡಿದರು. ೨೦೨೦ ರಲ್ಲಿ ಅವರು ತಮ್ಮ ಮೊದಲ ಹಿನ್ನೆಲೆ ಹಾಡನ್ನು ಸಂಗೀತ ನಿರ್ದೇಶಕ ಧರಣ್‌ಗಾಗಿ ಹಾಡಿದರು. ಯೂಟ್ಯೂಬ್‌ನಲ್ಲಿ "ವೀರತಿ ವೀರ" ಹಾಡು ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. == ವೈಯಕ್ತಿಕ ಜೀವನ == ಅವರು ಮುಂಬೈ ಮೂಲದ ಉದ್ಯಮಿ ನಿಖಿಲ್ ರಮೇಶ್ ಅವರನ್ನು ವಿವಾಹವಾದರು ಮತ್ತು ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. == ಉಲ್ಲೇಖಗಳು ==